ಶಾಂಘೈ, ನವೆಂಬರ್ ೧: ಚೀನಾದ ಶಾಂಘೈ ನಗರದಲ್ಲಿನೆಲೆಸಿರುವ ಕನ್ನಡಿಗರ ಸಂಘ ‘ಶಾಂಘೈ ಕನ್ನಡಿಗರು’ ನವೆಂಬರ್ ೧ 2025 ರಂದು ಕನ್ನಡ ರಾಜ್ಯೋತ್ಸವ ಮತ್ತುದೀಪಾವಳಿ ಹಬ್ಬವನ್ನು ಭವ್ಯವಾಗಿ ಆಚರಿಸಿತು. ರಮದಾಪ್ಲಾಜಾ ಪುಡಾಂಗ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ೧೦೦ ಕನ್ನಡಿಗರು, ಇತರ ಭಾರತೀಯ ಡಯಾಸ್ಪೊರಾ ಮತ್ತು ಕೆಲವು ಚೀನೀಮಿತ್ರರಿದ್ದರು. ಭಾರತೀಯ ಕಾನ್ಸುಲೇಟ್ ಅಧಿಕಾರಿಗಳು, ಪ್ರಸಿದ್ಧ ಶಿಲ್ಪಿಅರುಣ್ ಯೋಗಿರಾಜ್ ಸೇರಿದಂತೆ ಎಲ್ಲರೂ ಸೇರಿ ವಿದೇಶದ ನೆಲದಲ್ಲಿಕನ್ನಡ ಭಾಷೆ, ಸಂಸ್ಕೃತಿ ಮತ್ತು ರಾಷ್ಟ್ರೀಯ ಏಕತೆಯನ್ನು ಸಾರಿದರು.

ಕಾರ್ಯಕ್ರಮವು ಮಧ್ಯಾಹ್ನ೪ ಗಂಟೆಗೆ ಶಿಲ್ಪಕಲಾಕಾರ್ಯಾಗಾರದಿಂದಆರಂಭವಾಯಿತು. ಪ್ರಸಿದ್ಧಶಿಲ್ಪಿ ಅರುಣ್ಯೋಗಿರಾಜ್ ಅವರು ಈ ಕಾರ್ಯಾಗಾರಕ್ಕೆ ನಾಯಕತ್ವವಹಿಸಿ, ಭಾಗವಹಿಸಿದವರಿಗೆಕನ್ನಡ ಸಂಸ್ಕೃತಿಯಶಿಲ್ಪಕಲೆಯನ್ನು ಕೈಯಲ್ಲಿಅನುಭವಿಸುವ ಅವಕಾಶನೀಡಿದರು. ಭರತ್ ಸಿಂಗ್ಮತ್ತು ಗೌರಿ ಕೌರ್(ಬೀಜಿಂಗ್) ಅವರಸಹಕಾರ ಶಿಲ್ಪಕಲಾಕಾರ್ಯಾಗಾರ ನಡೆಸಲುಸಾಧ್ಯವಾಯಿತು, ವಿಶೇಷಶಿಲ್ಪಕಲಾ ಮಣ್ಣು ಮತ್ತುಉಪಕರಣಗಳನ್ನು ಒದಗಿಸಿದ್ದರು.

ಸಂಜೆ ೫:೪೫ಕ್ಕೆ ಆರಂಭವಾದಮುಖ್ಯ ಕಾರ್ಯಕ್ರಮ ಗಣಪತಿಪ್ರಾರ್ಥನೆಯೊಂದಿಗೆ ನಡೆಯಿತು. ನಂತರ ಭಾರತದ ಶಾಂಘೈಕಾನ್ಸುಲ್ ಜನರಲ್ ಶ್ರೀ ಪ್ರತೀಕ್ಮಾಥುರ್, ಶಿಲ್ಪಿ ಅರುಣ್ಯೋಗಿರಾಜ್ ಮತ್ತು ಇತರಅತಿಥಿಗಳು ದೀಪ ಬೆಳಗಿಸಿಕಾರ್ಯಕ್ರಮವನ್ನುಉದ್ಘಾಟಿಸಿದರು. ಶ್ರೀಮತಿ ಭಾರತಿ ಸಿಂಹ, ಅನುಷ್ಕಾ ಮತ್ತು ತನಿಷಾಅವರಿಂದ ‘ಹಚ್ಚೇವು ಕನ್ನಡದ ದೀಪ’ ಹಾಡು ಮೊಳಗಿತು. ಕನ್ನಡನಾಡಗೀತೆಯೊಂದಿಗೆ ಶಾಂಘೈ ಕನ್ನಡಿಗರ ಸಂಘದ ಮುಖ್ಯ ಪ್ರತಿನಿಧಿಶ್ರೀಮತಿ ಕಲಾ ಅವರು ಕಾರ್ಯಕ್ರಮವನ್ನುದ್ದೇಶಿಸಿ ನೆರೆದವರನ್ನುರಾಜ್ಯೋತ್ಸವ ಸಮಾರಂಭಕ್ಕೆ ಸ್ವಾಗತಿಸಿದರು.

ಶ್ರೀಯುತ ಅರುಣ್ಯೋಗಿರಾಜ್ ಅವರ ಜೀವನಮತ್ತು ಕಲೆಯ ಕುರಿತ ಶಾಂಘೈಕನ್ನಡಿಗರು ನಿರ್ಮಿಸಿದಚಿತ್ರಕಥೆಯ ಕಿರುಚಿತ್ರಪ್ರದರ್ಶಿಸಲಾಯಿತು, ನಂತರ ಅತಿಥಿಗಳನ್ನುಸನ್ಮಾನಿಸಲಾಯಿತು. ಕಾನ್ಸುಲ್ಜನರಲ್ ಪ್ರತೀಕ್ ಮಾಥುರ್ ಮತ್ತು ಅರುಣ್ ಯೋಗಿರಾಜ್ ಅವರುಸಮುದಾಯಕ್ಕೆ ಸಂದೇಶ ನೀಡಿದರು. 

ರಾಷ್ಟ್ರೀಯ ಏಕತಾ ದಿವಸದಅಂಗವಾಗಿ ಸರ್ದಾರ್ವಲ್ಲಭಭಾಯಿ ಪಟೇಲ್ ಅವರಚಿತ್ರಕಥೆ ಮತ್ತು ರಾಷ್ಟ್ರೀಯಏಕತಾ ದಿನದ ಪ್ರತಿಜ್ಞಾ ವಿಧಿನಡೆಯಿತು. ಪದ್ಮಭೂಷಣ ಡಾ. ಎಸ್.ಎಲ್. ಭೈರಪ್ಪ ಅವರಜೀವನ ಮತ್ತು ಸಾಹಿತ್ಯದ ಕುರಿತಶಾಂಘೈ ಕನ್ನಡಿಗರು ನಿರ್ಮಿಸಿದ ಮತ್ತೊಂದು ಚಿತ್ರಕಥೆಯ ಪ್ರದರ್ಶನನಡೆಯಿತು ಮತ್ತು ಭೈರಪ್ಪನವರ ಕನ್ನಡ ಸಾಹಿತ್ಯದ ಕೊಡುಗೆಯನ್ನುಸ್ಮರಿಸಲಾಯಿತು.

ಶ್ರಾವ್ಯ ಅವರಿಂದ ಕೂಚುಪುಡಿ ನೃತ್ಯ. ಮಿಸ್ ವಾಂಗ್ ಅವರಿಂದಭರತನಾಟ್ಯ. ಮೋನಿಷ್ ಅವರಿಂದ ‘ಕರುನಾಡ ತಾಯಿ ಸದಾ ಚಿನ್ಮಯಿ’ ಹಾಡು. ಮೇಶ್ವಾ ಅವರಿಂದ ಅರೆಶಾಸ್ತ್ರೀಯ ನೃತ್ಯ (‘ನಮಾಮಿ ನಮಾಮಿ’). ಆಕಾಶ್ ಅವರಿಂದ ಕೀಬೋರ್ಡ್ ವಾದನ (‘ನಾವಾಡುವ ನುಡಿಯೇ ಕನ್ನಡನುಡಿ’).

ಕವಿತಾ ಮತ್ತು ಸೌಮ್ಯ ಪ್ರಭು ಅವರಿಂದ ಶಾಸ್ತ್ರೀಯ ಸಂಗೀತ (‘ಶ್ರೀ ಮಹಾಗಣಪತಿಮ್’). ಶ್ರೀಮತಿ ಭಾರತಿ ಮತ್ತು ಮ್ಯಾಂಡಿ ಅವರಿಂದ ವೀಣೆ ಮತ್ತುತಬಲಾ ವಾದನ. ಮಿಸ್ ವಾಂಗ್ ಮತ್ತು ತಂಡದಿಂದ ನೃತ್ಯ ಮಿಶ್ರಣ. ಗಿರೀಶ್, ಶರತ್, ಮೇಶ್ವಾ, ಸೌಮ್ಯ ಮತ್ತು ಕವಿತಾ ಅವರಿಂದ ಸಮೂಹಗಾಯನ (‘ಹುಟ್ಟಿದರೆ ಕನ್ನಡ ನಾಡಲ್ಲೇ ಹುಟ್ಟಬೇಕು’). ಭಾರತಿ ಮತ್ತುತಂಡದಿಂದ ಸಮೂಹ ಗಾಯನ (‘ಇದೇ ನಾಡು, ಇದೇ ಭಾಷೆ’).

ಶ್ರೀಯುತ ಅರುಣ್ಯೋಗಿರಾಜ್ ಅವರಿಗೆಭಾರತೀಯ ಶಿಲ್ಪಕಲೆಗೆನೀಡಿದ ಅತ್ಯುತ್ತಮ ಕೊಡುಗೆಹಾಗು ಜಾಗತಿಕ ವೇದಿಕೆಯಲ್ಲಿಭಾರತದ ಸಾಂಸ್ಕೃತಿಕಪರಂಪರೆಯನ್ನುಉತ್ತೇಜಿಸುವಲ್ಲಿ ತೋರಿದಸಮರ್ಪಣೆಯನ್ನು ಗುರುತಿಸಿಶಾಂಘೈ ಕನ್ನಡಿಗರು ಗೌರವ ಪ್ರಮಾಣಪತ್ರವನ್ನುಪ್ರದಾನಮಾಡಲಾಯಿತು. ಕಾರ್ಯಕ್ರಮದ ಕೊನೆಯಲ್ಲಿ ಬಹುಮಾನವಿತರಣೆ ನಡೆಯಿತು. 

ಧನ್ಯವಾದ ಸಲ್ಲಿಸುವಲ್ಲಿ ಅತಿಥಿಗಳಾದ ಪ್ರತೀಕ್ ಮಾಥುರ್, ಅದಿತ್ಯ ಪ್ರಭುದೇಸಾಯಿ, ಅರುಣ್ ಯೋಗಿರಾಜ್ ಅವರನ್ನು ವಿಶೇಷವಾಗಿಗೌರವಿಸಲಾಯಿತು. ವಿಶೇಷ ಅತಿಥಿಗಳ ಮೈಸೂರಿನಿಂದ ಶಾಂಘೈಗೆಪ್ರಯಾಣ ವ್ಯವಸ್ಥೆಗೆ ಸಹಕರಿಸಿದ ಗಣೇಶ್ ಸಿಂಗ್ ಅವರನ್ನು ಮೆಚ್ಚುಗೆಮಾಡಲಾಯಿತು. ಶಾಂಘೈ ಕನ್ನಡಿಗ ಸ್ವಯಂಸೇವಕರಾದ ಸದಾಶಿವ,ಸಾರಿಗಾ ಕೃಷ್ಣನ್, ನಾಗರತ್ನ ಹೆಗ್ಡೆ, ಗಿರೀಶ್ ಬಿ ಎಸ್,  ಶರತ್, ಮಾಸ್ಟರ್ಚಿರಾವ್, ಲತಾಶ್ರೀ, ತೇಜಸ್ವಿನಿ, ರಫೀಕ್, ಸಂದೀಪಶಾಸ್ತ್ರೀ ಮತ್ತುಇತರರನ್ನು ಅಭಿನಂದಿಸಲಾಯಿತು. ವಿಶೇಷವಾಗಿ ಸ್ವಯಂಸೇವಕರಾದಕಮಲಲತಾ ಮತ್ತು ನೂರುಲ್ಲಾ ಅವರು ಈ ಕಾರ್ಯಕ್ರಮಕ್ಕೆ ಅಪಾರಶ್ರಮವಹಿಸಿ ವಿಜೃಂಭಣೆಯಿಂದ ನಡೆಸಲು ಕಾರಣೀಭೂತರಾಗಿದ್ದಕ್ಕಾಗಿಅಭಿನಂದನಾ ಪೂರ್ವಕ ಶ್ಲಾಘಿಸಲಾಯಿತು. ಇಂಡಿಯನ್ ಕಿಚನ್ಪುಡಾಂಗ್‌ನ ರುಚಿಕರ ಭೋಜನ, ರಮದಾ ಪ್ಲಾಜಾ ಪುಡಾಂಗ್‌ನ ಸ್ಥಳಸೌಲಭ್ಯ ಮತ್ತು ಡಿಜೆ ಶ್ರೀಯವರ ಸಂಗೀತವು ಕಾರ್ಯಕ್ರಮಕ್ಕೆ ಮೆರಗುನೀಡಿತು.

ರಾತ್ರಿ ೯:೩೦ಕ್ಕೆ ಸಮೂಹ ಛಾಯಾಚಿತ್ರದೊಂದಿಗೆ ಕಾರ್ಯಕ್ರಮಮುಕ್ತಾಯಗೊಂಡಿತು. ಈ ಆಚರಣೆಯು ವಿದೇಶದ ನೆಲದಲ್ಲಿ ಕನ್ನಡ ಭಾಷೆಮತ್ತು ಸಂಸ್ಕೃತಿಯನ್ನು ಬೆಳೆಸುವ ಶಾಂಘೈ ಕನ್ನಡಿಗರ ಪ್ರಯತ್ನಕ್ಕೆಸಾಕ್ಷಿಯಾಯಿತು. “ಜಯ ಕರ್ನಾಟಕ, ಜಯ ಹಿಂದ್” ಘೋಷಣೆಯೊಂದಿಗೆ ಸಂಭ್ರಮಕ್ಕೆ ತೆರೆಯೆಳೆಯಲಾಯಿತು. 

ಕರ್ನಾಟಕದ ಕಲೆ ಮತ್ತು ಸಂಸ್ಕೃತಿಯನ್ನು ಶ್ರೀಮಂತಗೊಳಿಸಿದ ಗಮನಾರ್ಹ ಸಾಧಕರಿಗೆ ನಾವು ನಮ್ಮ ಹೃತ್ಪೂರ್ವಕ ಕೃತಜ್ಞತೆಯನ್ನು ಸಲ್ಲಿಸುತ್ತೇವೆ. ರಾಜ್ಯೋತ್ಸವ ಮತ್ತು ದೀಪಾವಳಿಯ ಆಚರಣೆಯ ಸಮಯದಲ್ಲಿ, ತಮ್ಮ ಬಿಡುವಿಲ್ಲದ ಜೀವನದ ನಡುವೆಯೂ ನಮಗೆ ಸ್ಫೂರ್ತಿ ನೀಡುವ ಶುಭಾಶಯಗಳನ್ನು ಕಳುಹಿಸಿದ್ದಕ್ಕಾಗಿ ಶ್ರೀ ಗಿರೀಶ್ ಕಾಸರವಳ್ಳಿ, ಟಿ.ಎನ್. ಸೀತಾರಾಮ್, ನಾಗತಿಹಳ್ಳಿ ಚಂದ್ರಶೇಖರ್, ಭಾರ್ಗವ, ಸುಂದರ್ ರಾಜ್, ರಮೇಶ್ ಅರವಿಂದ್, ಅನು ಪ್ರಭಾಕರ್, ವಿನಯ್ ರಾಜ್‌ಕುಮಾರ್, ಮಾಸ್ಟರ್ ಮಂಜುನಾಥ್, ಸುನಿಲ್ ರಾವ್, ವಿಕ್ರಮ್ ಸೂರಿ, ನಮ್ರತಾ ರಾವ್ ಮತ್ತು ಬೇಗರ್ ಶಿವಕುಮಾರ್ ಅವರಿಗೆ ವಿಶೇಷ ಧನ್ಯವಾದಗಳು.

ಡಾ.ಅರುಣ್ ಯೋಗಿರಾಜ್ ಮತ್ತು ಡಾ.ಎಸ್.ಎಲ್. ಭೈರಪ್ಪ ಅವರ ಸಾಕ್ಷ್ಯಚಿತ್ರಗಳ ನಿರ್ಮಾಣ, ಸಾಧಕರ ಶುಭಾಶಯಗಳ ವೀಡಿಯೊ ಚಿತ್ರೀಕರಣ ಮತ್ತು ಸಂಕಲನದಲ್ಲಿ ನಮಗೆ ಬೆಂಬಲ ನೀಡಿದ ಪರಮ ಕಲಾಮಾದ್ಯಮ ಮತ್ತು ಅವರ ತಂಡಕ್ಕೆ ನಮ್ಮ ಪ್ರಾಮಾಣಿಕ ಕೃತಜ್ಞತೆಯನ್ನು ವ್ಯಕ್ತಪಡಿಸಲು ಬಯಸುತ್ತೇವೆ.

Leave a comment

Your email address will not be published. Required fields are marked *