ಶಾಂಘೈ, ನವೆಂಬರ್ ೧: ಚೀನಾದ ಶಾಂಘೈ ನಗರದಲ್ಲಿನೆಲೆಸಿರುವ ಕನ್ನಡಿಗರ ಸಂಘ ‘ಶಾಂಘೈ ಕನ್ನಡಿಗರು’ ನವೆಂಬರ್ ೧ 2025 ರಂದು ಕನ್ನಡ ರಾಜ್ಯೋತ್ಸವ ಮತ್ತುದೀಪಾವಳಿ ಹಬ್ಬವನ್ನು ಭವ್ಯವಾಗಿ ಆಚರಿಸಿತು. ರಮದಾಪ್ಲಾಜಾ ಪುಡಾಂಗ್‌ನಲ್ಲಿ ನಡೆದ ಈ ಕಾರ್ಯಕ್ರಮದಲ್ಲಿ ಸುಮಾರು ೧೦೦ ಕನ್ನಡಿಗರು, ಇತರ ಭಾರತೀಯ ಡಯಾಸ್ಪೊರಾ ಮತ್ತು ಕೆಲವು ಚೀನೀಮಿತ್ರರಿದ್ದರು. ಭಾರತೀಯ ಕಾನ್ಸುಲೇಟ್ ಅಧಿಕಾರಿಗಳು, ಪ್ರಸಿದ್ಧ ಶಿಲ್ಪಿಅರುಣ್ ಯೋಗಿರಾಜ್ ಸೇರಿದಂತೆ ಎಲ್ಲರೂ ಸೇರಿ ವಿದೇಶದ ನೆಲದಲ್ಲಿಕನ್ನಡ ಭಾಷೆ, ಸಂಸ್ಕೃತಿ ಮತ್ತು ರಾಷ್ಟ್ರೀಯ ಏಕತೆಯನ್ನು ಸಾರಿದರು. ಕಾರ್ಯಕ್ರಮವು ಮಧ್ಯಾಹ್ನ೪ ಗಂಟೆಗೆ ಶಿಲ್ಪಕಲಾಕಾರ್ಯಾಗಾರದಿಂದಆರಂಭವಾಯಿತು. […]


