ಶಾಂಘೈ ನಲ್ಲಿ ಕನ್ನಡಿಗರ ಬಳಗದ ಯುಗಾದಿ ಸಂಭ್ರಮಾಚರಣೆಯು ದಿನಾಂಕ ಏಪ್ರಿಲ್ ೨೦, ೨೦೧೯ ರಂದು ಹರ್ಷೋಲ್ಲಾಸದಿಂದ ನಡೆಯಿತು. ಯುಗಾದಿ ಸಂಭ್ರಮ ಕಾರ್ಯಕ್ರಮವು ವಿಕಾರಿ ನಾಮ ಸಂವತ್ಸರದ ಹೊಸವರ್ಷಾಚರಣೆಯ ಜೊತೆಗೆ ಶಾಂಘೈ ಕನ್ನಡಿಗರ ಬಳಗದ ಮೊದಲ ವಾರ್ಷಿಕೋತ್ಸವವೂ ಆಗಿದ್ದರಿಂದ ಸ್ಮರಣೀಯವಾಗಿತ್ತು.  ಕಳೆದ ವರ್ಷ, ೨೦೧೮ ರ ಯುಗಾದಿ ಸಮಯದಲ್ಲಿ ಕನ್ನಡಿಗ ಮಿತ್ರರು ಒಗ್ಗೂಡಿ ಶಾಂಘೈ ಕನ್ನಡಿಗರ ಬಳಗವನ್ನು ರಚಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ಭಾವನೆಗಳ ಅನಾವರಣವಾಗಲು ಪ್ರಯತ್ನಿಸುತ್ತಿರುವ ಶಾಂಘೈ ಕನ್ನಡಿಗರ ಬಳಗಕ್ಕೆ ಮೊದಲ ವಾರ್ಷಿಕಾಚರಣೆಯ ಸಂಭ್ರಮ. 

ದೀಪವನ್ನು ಬೆಳಗಿಸಿ ಯುಗಾದಿ ಸಂಭ್ರಮ ಸಮಾರಂಭವನ್ನು ಬೆಳಿಗ್ಗೆ ೧೦:೩೦ ಗಂಟೆಗೆ ಪ್ರಾರಂಭಿಸಲಾಯಿತು. ಮಕ್ಕಳು ಮತ್ತು ವಯಸ್ಕರು ಪ್ರಸ್ತುತಪಡಿಸಿದ ವಿವಿಧ ಸಾಂಸ್ಕೃತಿಕ ಕಾರ್ಯಕ್ರಮಗಳು ವೀಕ್ಷಕರಿಗೆ ಮುದನೀಡಿದವು. ಶಾಂಘೈನ ಪುಟಾಣಿ ಕನ್ನಡಿಗರು ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಉತ್ಸಾಹಭರಿತರಾಗಿ ಪ್ರದರ್ಶಿಸಿದರು.

ಸಮಾರಂಭದ ಅಹ್ವಾನ ಗೀತೆಗಳನ್ನು ಶ್ರೀಮತಿ. ರೀನಾ ಮಯೂರ್ ಮತ್ತು ಜೊತೆಯಾಗಿ ಕು. ವಂಶಿಕಾ, ಕು. ಮಿತ್ರವಿಂದಾ ಮತ್ತು ಕು. ಆರುಷ ಪ್ರಸ್ತುತಪಡಿಸಿದರು. ಕು. ಕಿಯಾನ್ “ಯುಗ ಯುಗಾದಿ ಕಳೆದರು ಯುಗಾದಿ ಮರಳಿ ಬರುತಿದೆ …” ಗೀತೆಯನ್ನು ಮತ್ತು ಕು. ಪ್ರಣಿತಾ ಹಿಂದಿ ಹಾಡಿನ ಸಂಸ್ಕೃತ ಅವತರಿಣಿಕೆಯನ್ನು ಸುಮಧುರವಾಗಿ ಹಾಡಿದರು. ಜಾನಪದ ಹಾಡು “ಜಲ್ಲೆ ಕಬ್ಬು ..” ಗೆ ಕು. ಪ್ರಣವಿಯು ನೃತ್ಯ ಪ್ರದರ್ಶನ ಮಾಡಿ ತನ್ನ ಪುಟ್ಟ ಮೋಹಕ ಭಂಗಿಯಿಂದ ಎಲ್ಲರನ್ನೂ ರಂಜಿಸಿದಳು. 

ಕು. ರಾಜೀವ್ (ಕೂಸನು ಕಂಡೀರಾ) , ಕು. ಸಿರಿ (ಟು ಆಫ್ ಅಸ್ ),  ಶ್ರೀಮತಿ. ಭಾರತೀ (ಆನೆ ಬಂದಿತ್ತಮ್ಮ) ಮತ್ತು ಶ್ರೀಮತಿ. ಸ್ಮಿತಾ (ತುಂತುರು ಅಲ್ಲಿ ನೀರ ಹಾಡು) ರವರು ಹಾಡಿದ ಸುಂದರ ಗೀತೆಗಳನ್ನು ಪ್ರೇಕ್ಷಕರು ಆನಂದಿಸಿದರು. ಕು. ರಾಹುಲ್ ಸುಮಧುರ ಕೀಬೋರ್ಡ ನುಡಿಸಿದರು ಮತ್ತು ಶ್ರೀ. ಸಿಂಹ ಲಿಂಗಾಷ್ಟಕ ಹಾಡುವಾಗ ಕೀಬೋರ್ಡ್ ಹಿನ್ನೆಲೆಯನ್ನು ಒದಗಿಸಿದರು.

ಕು. ದೀಪ್ತಿಯ ಅರೆ ಶಾಸ್ತ್ರೀಯ ಫ್ಯೂಶನ್ ನೃತ್ಯ ಪ್ರದರ್ಶನ, ಕು. ತನ್ವಿ ಅರೆ ಶಾಸ್ತ್ರೀಯ ನೃತ್ಯ ಮತ್ತು ಕು. ಸ್ಫೂರ್ತಿಯ ನೃತ್ಯ ಪ್ರದರ್ಶನವು ಅತ್ಯುತ್ತಮವಾಗಿ ಮೂಡಿಬಂದು ಪ್ರೇಕ್ಷಕರನ್ನು ಮನಸೂರೆಗೊಳಿಸಿದವು. ಕು. ದೀಪಾಂಜಲಿ ಏಳು ಭಾಷೆಯಲ್ಲಿ ಮ್ಯಾಶ್ಅಪ್ ಗೀತೆಯನ್ನು ಹಾಡಿ ಪ್ರೇಕ್ಷಕರನ್ನು ವಿಸ್ಮಯಗೊಳಿಸಿದಳು. 

ಯುಗಾದಿ ಆಚರಣೆ ಪ್ರಯುಕ್ತ ಪುಟಾಣಿ ಮಕ್ಕಳಿಂದ ವಿಭಿನ್ನವಾದ ಫ್ಯಾಷನ್ ಶೋ ನಡೆಯಿತು, ಇದರಲ್ಲಿ ಸಾಂಪ್ರದಾಯಿಕ ಆಚರಣೆಯ ಬಗ್ಗೆ ಮಾಹಿತಿಯುಳ್ಳ ಚಿತ್ರ ಫಲಕಗಳನ್ನು ಹಿಡಿದು ಪುಟಾಣಿಗಳಾದ ಕು. ಇಶಿಕಾ – ಆರುಷ್ (ಯುಗಾದಿ ಪಚಡಿ), ಕು. ಶಿವ್ಯಾ – ಕಿಯಾನ್ (ತೋರಣ), ಕು. ಪ್ರೇರಣಾ – ರಾಘವ್ (ಪಂಚಾಂಗ), ಕು. ಶಾಯಿಸ್ತಾ – ರಾಹುಲ್ (ರಂಗೋಲಿ), ಕು. ಶ್ರವ್ಯಾ – ರಾಜೀವ್ (ಆಧ್ಯಾತ್ಮಿಕ ಸ್ಥಳ), ಕು. ಸ್ಪೂರ್ತಿ – ಪರಮ್ (ಅರಿಶಿಣ – ಕುಂಕುಮ), ಕು. ವಂಶಿಕಾ – ವಿಧು (ವರುಣ), ಕು. ಮಾಹಿತಾ – ಪ್ರಣವಿ (ಹೋಳಿಗೆ/ಒಬ್ಬಟ್ಟು) ಮತ್ತು ಕು. ದೀಪ್ತಿ – ಅಪೇಕ್ಷಾ (ಪೂಜಾ ತಟ್ಟೆ) ವೇದಿಕೆ ಮೇಲೆ ಪ್ರದರ್ಶಿಸಿದರು. ಈ ಪ್ರದರ್ಶನದ ಹಿನ್ನಲೆಯಲ್ಲಿ ಪ್ರತಿ ಫಲಕದ ಮಹತ್ವದ ವಿವರಣೆ ನೀಡಲಾಯಿತು. ವಿಶೇಷವಾಗಿ ಎಲ್ಲರೂ ಬೇವು-ಬೆಲ್ಲದ ಮಿಶ್ರಣದ ಸೇವನೆ ಮಾಡಿದರು.  

ಶ್ರೀ. ಪ್ರದೀಪ್ ತಮ್ಮ ಸಿರಿಕಂಠದಿಂದ ಕೆಲ ಕನ್ನಡ ಚಲನಚಿತ್ರಗಳ ಮಧುರ ಗೀತೆಗಳನ್ನು ಹಾಡಿ ಪ್ರೇಕ್ಷಕರ ಮನಸೂರೆ ಗೊಳಿಸಿದರು. ಶ್ರೀ. ಮಲ್ಲಿಕಾರ್ಜುನ  ಮಿಮಿಕ್ರಿ ಮೂಲಕ ಎಲ್ಲರನ್ನೂ ನಗೆಗಡಲಿನಲ್ಲಿ ತೇಲಿಸಿದರು. ಮಕ್ಕಳನ್ನು ಸುಕೇಶ್ ರಾವ್ ಮತ್ತು ತಂಡವು ಆಸಕ್ತಿದಾಯಕ ಆಟಗಳ ಮೂಲಕ ಸಂಪೂರ್ಣವಾಗಿ ತೊಡಗಿಸಿಕೊಂಡಿದ್ದರು. ಕಾರ್ಯಕ್ರಮದ ನಿರೂಪಣೆಯನ್ನು ಶ್ರೀಮತಿ. ನಿವೇದಿತಾ ಮತ್ತು ಶ್ರೀಮತಿ. ಅನಿತಾ ನಿಭಾಯಿಸಿದರು. 

ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕನ್ನಡಿಗರು ಸಂಪೂರ್ಣವಾಗಿ ಆನಂದಿಸಿದರು ಮತ್ತು ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮದ ಪುಟಾಣಿ ಭಾಗಿಗಳಿಗೆ ಉಡುಗೊರೆಗಳಿಂದ ಅಭಿನಂದಿಸಿಲಾಯಿತು.

ಶಾಂಘೈ ಕನ್ನಡಿಗರ ಬಳಗದ ಕಾರ್ಯಕರ್ತರಾದ ಶ್ರೀಮತಿ. ಕಮಲಲತಾ, ಶ್ರೀಮತಿ. ಪ್ರತಿಮಾ, ಶ್ರೀಮತಿ. ಮೋಹಿನಿ, ಶ್ರೀಮತಿ. ನಿವೇದಿತಾ, ಶ್ರೀಮತಿ. ರೀನಾ, ಶ್ರೀಮತಿ. ಅಪರ್ಣಾ, ಶ್ರೀಮತಿ. ಅದಿತಿ, ಶ್ರೀ. ಕಿರಣ್ (ಜೆ), ಶ್ರೀ. ಪ್ರದೀಪ್, ಶ್ರೀ. ರುಪೇಶ್, ಶ್ರೀ. ಸುಕೇಶ್, ಶ್ರೀ. ಕಿರಣ್ (ಬಿ), ಶ್ರೀ. ಸನಂದನ್, ಶ್ರೀ. ಸುನಿಲ್ , ಶ್ರೀ.ಸಂದೀಪಶಾಸ್ತ್ರೀ, ಶ್ರೀ. ರಫೀಕ್, ಶ್ರೀ. ಸಚಿನ್, ಶ್ರೀ. ವಿಕಾಸ್ ಮತ್ತು ಶ್ರೀ. ಶಿವಕುಮಾರ್ ಕಾರ್ಯಕ್ರಮದ ಉಸ್ತುವಾರಿ ವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದರು.

RELATED ITEMS: CHINA, KANNADIGA, SHANGHAI, SHANGHAIKANNADIGARU


Media Coverage

  1. 06 th May – Sanje Vani Mangalore edition, page 4 – hard copy
  2. 07 th May – Karnataka Malla Mumbai – hard copy
  3. 16 May – Hosadigantha e-paper Bengaluru, Page 8
  4. https://www.kannadigaworld.com/kannada/karavali-kn/381711.html 

Leave a comment

Your email address will not be published. Required fields are marked *