ಚೀನಾದ ಶಾಂಘೈ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ

ಪ್ರಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮ ಆಚರಣೆಯು ಶಾಂಘೈನಲ್ಲಿ ಭಾನುವಾರ, ನವೆಂಬರ್ ೨೫, ೨೦೧೮ ರಂದು ನಡೆಯಿತು. ಶಾಂಘೈ ಮತ್ತು ಸಮೀಪದ ಚಾಂಗ್ಷು , ಗ್ವಾಂಗ್ಝೋ ಮತ್ತು ನಿಂಗ್ಬೊ ನಗರಗಳಲ್ಲಿ ವಾಸಿಸುತ್ತಿರುವ ಸುಮಾರು ೧೩೦ ಕನ್ನಡಿಗರು ಈ  ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡದ ಕಂಪನ್ನು ಚೀನಾ ದೇಶದಲ್ಲಿ ಪಸರಿಸಿದರು. ಈ ಸಮಾರಂಭವನ್ನು ಶಾಂಘೈ ಕನ್ನಡಿಗರು ಆಯೋಜಿಸಿದ್ದರು.

ದೀಪವನ್ನು ಬೆಳಗಿಸುವದರ ಮೂಲಕ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಬೆಳಿಗ್ಗೆ ೧೦:೩೦ ಗಂಟೆಗೆ ಪ್ರಾರಂಭಿಸಲಾಯಿತು. “ನಾಡ ಗೀತೆ – ಜಯ ಭಾರತ ಜನನಿಯ  ತನಜಾತೆ ” ಮತ್ತು “ಹಚ್ಚೇವು ಕನ್ನಡದ ದೀಪ” ಗೀತೆಗಳನ್ನು ಕನ್ನಡಿಗರು  ಒಕ್ಕೋರಿಲಿನಿಂದ ಹಾಡಿದರು. ಅಲ್ಲದೆ, ಕು. ತನ್ವಿ ರಾವ್ ಮನೋಹರ ವಯೋಲಿನ್ ವಾದನದಿಂದ ರಾಷ್ಟ್ರಗೀತೆಯನ್ನು ನುಡಿಸಿದಾಗ ಕನ್ನಡಿಗರೆಲ್ಲರೂ ಭಾರತಮಾತೆಗೆ ತಮ್ಮ ಗೌರವವನ್ನು ವಂದಿಸಿದರು.

ಕರ್ನಾಟಕದ ಶ್ರೀಮಂತಿಕೆಯಾದ ಕಲೆ, ಸಾಹಿತ್ಯ, ಸಂಸ್ಕೃತಿ, ಭಕ್ತಿ ಮತ್ತು ಸುಂದರ ಭೂದೃಶ್ಯದ ಸಂಗಮ ತಿಳಿಸುವ “ನಮ್ಮ ಕರ್ನಾಟಕ” ಕಿರು ವಿಡಿಯೋ ಪ್ರದರ್ಶಿಸಿ ಕನ್ನಡ ನಾಡಿನ ಭವ್ಯ ಪರಂಪರೆಯ ಮರು ಅನುಭವ ಪಡೆಯಲಾಯಿತು.

ಕಾರ್ಯಕ್ರಮದ ವಿವರ:

ಶಾಂಘೈನ ಕನ್ನಡ ಪುಟಾಣಿಗಳು “ಸುಗ್ಗಿ ಕಾಲ” ಮತ್ತು “ಜಕ್ಕನಕ ಜಕ್ಕನಕ” ಎಂಬ ಜಾನಪದ ನೃತ್ಯವನ್ನು ಪ್ರದರ್ಶಿಸಿದರು. ಪ್ರದೀಪ್, ಭಾರತಿ, ಅದಿತಿ, ಪ್ರತಿಮಾ, ಕಲಾ, ಚಿರಾವ್, ರಾಜೀವ್ ಮತ್ತು ಲಕ್ಷ್ಮೀ ಯವರು ತಮ್ಮ ಸುಮಧುರ ಕಂಠದಿಂದ ಕನ್ನಡ ಗೀತೆಗಳನ್ನು ಹಾಡಿ ಪ್ರೇಕ್ಷಕರನ್ನು ರಂಜಿಸಿ ಕನ್ನಡ ಸಂಗೀತವನ್ನು ಮೆಲಕುವಂತೆ ಮಾಡಿದರು.

ಕು. ದೀಪ್ತಿಯ  ಜಾನಪದ ಮತ್ತು ಶಾಸ್ತ್ರೀಯ  ಫ್ಯೂಶನ್ ನೃತ್ಯ ಪ್ರದರ್ಶನ ಮತ್ತು ಕನ್ನಡಿತಿಯರ (ಮಹಿಳೆಯರ) ಗುಂಪಿನ ಫ್ಯೂಶನ್ ನೃತ್ಯವು (ಚೆನ್ನಪ್ಪ ಚೆನ್ನಾಗೌಡ – ಎಲ್ಲೋ ಜಿನುಗಿರುವಾ – ಘುಮಾರ್ರ) ಪ್ರದರ್ಶನವು ಅತ್ಯುತ್ತಮವಾಗಿ ಮೂಡಿಬಂದು ಪ್ರೇಕ್ಷಕರನ್ನು ಮನಸೂರೆಗೊಳಿಸಿದವು.

ಕು.ತನ್ವಿ ರಾವ್ ಅವರ ಪಪೆಟ್ ಪ್ರದರ್ಶನ – ಮಾತನಾಡುವಾ ಗೊಂಬೆ ಬಹಳ ಹಾಸ್ಯಮಯದಿಂದ ಕೂಡಿತ್ತು, ಕು. ಸಾತ್ವಿಕ್ ಹುಟ್ಟಿದರೇ ಕನ್ನಡ  ನಾಡಲ್ ಹುಟ್ಟಬೇಕು .. ಗಾನದ ಕೀಬೋರ್ಡ್ ನುಡಿಸಿದರು. ಮಕ್ಕಳು ಮತ್ತು ವಯಸ್ಕರಿಗೆ ಸುಕೇಶ್ ರಾವ್ ಮತ್ತು ತಂಡವು ಸೂಪರ್ ನಿಮಿಷದ ಆಟವು ಪ್ರೇಕ್ಷಕರನ್ನು ಚೆನ್ನಾಗಿ ಬೆರೆಯುವಂತೆ ಮಾಡಿತು.

ಈ ಎಲ್ಲಾ ಸಾಂಸ್ಕೃತಿಕ ಕಾರ್ಯಕ್ರಮಗಳನ್ನು ಕನ್ನಡಿಗರು ಸಂಪೂರ್ಣವಾಗಿ ಆನಂದಿಸಿದರು ಮತ್ತು ಎಲ್ಲ ಸಾಂಸ್ಕೃತಿಕ ಕಾರ್ಯಕ್ರಮದ ಭಾಗಿಗಳಿಗೆ ಜ್ಞಾಪಕಾರ್ಥವಾಗಿ ಪ್ರಶಸ್ತಿ ಪ್ರದಾನ ಮಾಡಲಾಯಿತು.

ಈ ಕಾರ್ಯಕ್ರಮವನ್ನು ಆಚರಿಸುತ್ತಿರುವಾಗ, ಹಿರಿಯ ಕನ್ನಡ ನಟ ಅಂಬರೀಷ್ ಅವರ ನಿಧನದ ದುಃ ಖದ ಸುದ್ದಿ ತಿಳಿದು ಎಲ್ಲರೂ ೧ ನಿಮಿಷ ಮೌನ ಆಚರಿಸಿ ನಟನಿಗೆ ತಮ್ಮ ಕೊನೆಯ ಗೌರವವನ್ನು ಸಲ್ಲಿಸಿದರು.

ವಿಶಿಷ್ಟವಾದ ದಕ್ಷಿಣ ಭಾರತೀಯ ತಿಂಡಿ ಮತ್ತು ಊಟವು ಎಲ್ಲರಿಗೂ ಆನಂದಿಸಿತು. ಎಲ್ಲ ಪ್ರಾಯೋಜಕರಿಗೆ ತಮ್ಮ ಉದಾರ ಕೊಡುಗೆಗಾಗಿ  ಅಭಿನಂದಿಸಲಾಯಿತು. ಶಾಂಘೈ ಕನ್ನಡಿಗರ ಕಾರ್ಯಕರ್ತರಾದ ಕಿರಣ್ ಜಾಂಭೇಕರ್,ಪ್ರತಿಮಾ ಕುಲಕರ್ಣಿ, ಸಂದೀಪಶಾಸ್ತ್ರೀ ಕಾಶೀಕರ, ಪ್ರದೀಪ್ ರಾವ್, ಗಂಗಾಧರ , ರುಪೇಶ್, ಗಣೇಶ (ಜಸ್ಟ್ ಯೋಗ), ರವಿ, ಸನಂದನ್, ಭರತ್, ಸುನಿಲ್ ಮತ್ತು ರಘುರಾಮ್ ಕಾರ್ಯಕ್ರಮದ ಉಸ್ತುವಾರಿ ವಹಿಸಿ ಕಾರ್ಯಕ್ರಮವನ್ನು ಯಶಸ್ವೀಗೊಳಿಸಿದರು


ಕನ್ನಡ News ByIndSamachar Kannada Bureau Posted on 03/12/2018

Leave a comment

Your email address will not be published. Required fields are marked *