ಶಾಂಘೈ ಕನ್ನಡಿಗರಿಂದ ೬೫ನೇ ಕರ್ನಾಟಕ ರಾಜ್ಯೋತ್ಸವ ಆಚರಣೆ

ಕಳೆದ ಎರಡು ವರ್ಷಗಳಂತೆ ಈ ವರ್ಷವೂ ಕೂಡ ‘ಶಾಂಘೈ ಕನ್ನಡಿಗರ ಬಳಗವು’ ನವೆಂಬರ್ ೧ನೇ ತಾರೀಖು, ಭಾನುವಾರ ‘ಇಂಡಿಯನ್ ಕಿಚನ್ (ಮಿನ್ ಶೆಂಗ್ ರಸ್ತೆ)’ ಶಾಂಘೈದಲ್ಲಿ ಕನ್ನಡ ರಾಜ್ಯೋತ್ಸವವನ್ನು ವಿಜೃಂಭಣೆಯಿಂದ ಆಚರಿಸಿದರು. ಈ ಕರುನಾಡ ಸಂಭ್ರಮಾಚರಣೆಗೆ ಸುಮಾರು ೬೦ ಮಂದಿ ಕನ್ನಡಿಗರು ಶಾಂಘೈ ಹಾಗು ಹತ್ತಿರದ ನಗರಗಳಿಂದ ಬಂದು ಸೇರಿದ್ದರು. ಈ ಬಾರಿಯ ವಿಶೇಷವೆಂದರೆ, ತಮ್ಮ ವೈಯಕ್ತಿಕ ಕಾರಣಗಳಿಂದ ಈ ಕಾರ್ಯಕ್ರಮದಲ್ಲಿ ಉಪಸ್ಥಿತಲಾಗದವರಿಗಾಗಿ ಅಂತರ್ಜಾಲ ಸಭೆಯ ಮೂಲಕ ಭಾಗವಹಿಸಲು ವ್ಯವಸ್ಥೆಯನ್ನು ಮಾಡಲಾಗಿತ್ತು. ಕುಮಾರಿ ದೀಪ್ತಿಯವರು ಭಕ್ತಿಯಿಂದ ಪ್ರಾರ್ಥನೆಯನ್ನು […]

Read more