Kannada Rajyotsava 2018

ಚೀನಾದ ಶಾಂಘೈ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ ಪ್ರಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮ ಆಚರಣೆಯು ಶಾಂಘೈನಲ್ಲಿ ಭಾನುವಾರ, ನವೆಂಬರ್ ೨೫, ೨೦೧೮ ರಂದು ನಡೆಯಿತು. ಶಾಂಘೈ ಮತ್ತು ಸಮೀಪದ ಚಾಂಗ್ಷು , ಗ್ವಾಂಗ್ಝೋ ಮತ್ತು ನಿಂಗ್ಬೊ ನಗರಗಳಲ್ಲಿ ವಾಸಿಸುತ್ತಿರುವ ಸುಮಾರು ೧೩೦ ಕನ್ನಡಿಗರು ಈ  ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡದ ಕಂಪನ್ನು ಚೀನಾ ದೇಶದಲ್ಲಿ ಪಸರಿಸಿದರು. ಈ ಸಮಾರಂಭವನ್ನು ಶಾಂಘೈ ಕನ್ನಡಿಗರು ಆಯೋಜಿಸಿದ್ದರು. ದೀಪವನ್ನು ಬೆಳಗಿಸುವದರ ಮೂಲಕ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಬೆಳಿಗ್ಗೆ ೧೦:೩೦ ಗಂಟೆಗೆ ಪ್ರಾರಂಭಿಸಲಾಯಿತು. “ನಾಡ ಗೀತೆ – ಜಯ […]

Read more