Yugadi 2019 Celebration

ಶಾಂಘೈ ನಲ್ಲಿ ಕನ್ನಡಿಗರ ಬಳಗದ ಯುಗಾದಿ ಸಂಭ್ರಮಾಚರಣೆಯು ದಿನಾಂಕ ಏಪ್ರಿಲ್ ೨೦, ೨೦೧೯ ರಂದು ಹರ್ಷೋಲ್ಲಾಸದಿಂದ ನಡೆಯಿತು. ಯುಗಾದಿ ಸಂಭ್ರಮ ಕಾರ್ಯಕ್ರಮವು ವಿಕಾರಿ ನಾಮ ಸಂವತ್ಸರದ ಹೊಸವರ್ಷಾಚರಣೆಯ ಜೊತೆಗೆ ಶಾಂಘೈ ಕನ್ನಡಿಗರ ಬಳಗದ ಮೊದಲ ವಾರ್ಷಿಕೋತ್ಸವವೂ ಆಗಿದ್ದರಿಂದ ಸ್ಮರಣೀಯವಾಗಿತ್ತು.  ಕಳೆದ ವರ್ಷ, ೨೦೧೮ ರ ಯುಗಾದಿ ಸಮಯದಲ್ಲಿ ಕನ್ನಡಿಗ ಮಿತ್ರರು ಒಗ್ಗೂಡಿ ಶಾಂಘೈ ಕನ್ನಡಿಗರ ಬಳಗವನ್ನು ರಚಿಸಿದ್ದಾರೆ. ಕನ್ನಡ ಸಾಂಸ್ಕೃತಿಕ ಭಾವನೆಗಳ ಅನಾವರಣವಾಗಲು ಪ್ರಯತ್ನಿಸುತ್ತಿರುವ ಶಾಂಘೈ ಕನ್ನಡಿಗರ ಬಳಗಕ್ಕೆ ಮೊದಲ ವಾರ್ಷಿಕಾಚರಣೆಯ ಸಂಭ್ರಮ.  ದೀಪವನ್ನು ಬೆಳಗಿಸಿ ಯುಗಾದಿ […]

Read more
Kannada Rajyotsava 2018

ಚೀನಾದ ಶಾಂಘೈ ಕನ್ನಡಿಗರ ರಾಜ್ಯೋತ್ಸವ ಸಂಭ್ರಮ ಪ್ರಪ್ರಥಮ ಬಾರಿಗೆ ಕನ್ನಡ ರಾಜ್ಯೋತ್ಸವ ಮತ್ತು ದೀಪಾವಳಿ ಸಂಭ್ರಮ ಆಚರಣೆಯು ಶಾಂಘೈನಲ್ಲಿ ಭಾನುವಾರ, ನವೆಂಬರ್ ೨೫, ೨೦೧೮ ರಂದು ನಡೆಯಿತು. ಶಾಂಘೈ ಮತ್ತು ಸಮೀಪದ ಚಾಂಗ್ಷು , ಗ್ವಾಂಗ್ಝೋ ಮತ್ತು ನಿಂಗ್ಬೊ ನಗರಗಳಲ್ಲಿ ವಾಸಿಸುತ್ತಿರುವ ಸುಮಾರು ೧೩೦ ಕನ್ನಡಿಗರು ಈ  ಕಾರ್ಯಕ್ರಮದಲ್ಲಿ ಭಾಗವಹಿಸಿ ಕನ್ನಡದ ಕಂಪನ್ನು ಚೀನಾ ದೇಶದಲ್ಲಿ ಪಸರಿಸಿದರು. ಈ ಸಮಾರಂಭವನ್ನು ಶಾಂಘೈ ಕನ್ನಡಿಗರು ಆಯೋಜಿಸಿದ್ದರು. ದೀಪವನ್ನು ಬೆಳಗಿಸುವದರ ಮೂಲಕ ಕನ್ನಡ ರಾಜ್ಯೋತ್ಸವ ಸಮಾರಂಭವನ್ನು ಬೆಳಿಗ್ಗೆ ೧೦:೩೦ ಗಂಟೆಗೆ ಪ್ರಾರಂಭಿಸಲಾಯಿತು. “ನಾಡ ಗೀತೆ – ಜಯ […]

Read more